ಕನ್ನಡದಲ್ಲೊಂದು ಆರ್.ಜಿ.ವಿ. ಶೈಲಿಯ ಚಿತ್ರ ರೆಡ್
Posted date: 18 Thu, Feb 2016 – 01:43:16 PM

ಕನ್ನಡ ಚಿತ್ರರಂಗದಲ್ಲಿ ಇದೀಗ ಹೊಸಥರದ ನಿರೂಪಣೆ ಇರುವಂಥ ಚಿತ್ರಗಳೇ ಗೆಲ್ಲುತ್ತಿವೆ.  ಅದರಲ್ಲೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ವೀಕ್ಷಕರು ಇಷ್ಟಪಡುತ್ತಿದ್ದಾರೆ.  ಕನ್ನಡ ಸಿನಿ ಪ್ರೇಕ್ಷಕರ ನಾಡಿಮಿಡಿಯನ್ನು ಮನಗಂಡ ನಿರ್ದೇಶಕ ರಾಜೇಶ್‌ಮೂರ್ತಿ ಅವರು ಕುತೂಹಲಭರಿತ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥಾನಕ ಹೊಂದಿದ ಚಲನಚಿತ್ರವೊಂದನ್ನು ಸದ್ದಿಲ್ಲದೆ ಮಾಡಿ ಮುಗಿಸಿದಾರೆ.  ಬಾಲಿವುಡ್‌ನಲ್ಲಿ ರಾಮ್‌ಗೋಪಾಲ್ ವರ್ಮ ಹಾಗೂ ಮಹೇಷ್ ಭಟ್ ಅವರ ಶೈಲಿಯಲ್ಲಿ ಈ ಕಥೆ ಹೆಣೆದಿರುವ ರಾಜೇಶ್ ಮೂರ್ತಿ ಚಿತ್ರಕ್ಕೆ ರೆಡ್ ಎಂದು ಶೀರ್ಷಿಕೆ ಇಟ್ಟಿದ್ದಾರೆ.  ಈ ಹಿಂದೆ ಷಡ್ಯಂತ್ರ ಮನಿಹನಿಶನಿ ಚಿತ್ರಗಳನ್ನು ನಿರ್ದೇಶಿಸಿದ್ದ ಇವರಿಗೆ ರೆಡ್ ಮೂರನೇ ಪ್ರಯತ್ನ ಪತಿ ಪತ್ನಿಯ ಸಂಬಂಧಗಳು ಅಡ್ಡದಾರಿ ಹಿಡಿದಾಗ ಮೂರನೇ ವ್ಯಕ್ತಿ ಪ್ರವೇಶಿಸಿ ಅವರಿಂದುಂಟಾಗುವ ಅನಾಹುತಗಳನ್ನು ರೆಡ್ ಚಿತ್ರದಲ್ಲಿ ಹೇಳಲಾಗಿದೆ.  ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.  ಆಧುನಿಕ ಜೀವನ ಶೈಲಿಯಲ್ಲಿ ಮನುಷ್ಯ ತನ್ನ ಕಾಮನೆಗಳನ್ನು ಹತ್ತಿಕ್ಕಲಾರದೆ ಅದನ್ನು ಈಡೇರಿಸಿಕೊಳ್ಳು ಅನೇಕ ದುರ್ಮಾರ್ಗಗಳನ್ನು ಹಿಡಿಯುತ್ತಾನೆ.  ಇಂಥ ಸೂಕ್ಷ್ಮವಾದ ಅನೇಕ ಅಂಶಗಳನ್ನು ರೆಡ್ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ.  
ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಮರ್ಡರ್‌ಮಿಸ್ಟ್ರಿ ಕೂಡ ಈ ಚಿತ್ರದಲ್ಲಿದ್ದು ಈಗಾಗಲೇ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರ ಕಳೆದ ವಾರವಷ್ಟೇ ಸೆನ್ಸಾರ್ ಮಂಡಳಿಯ ಮುಂದೆ ಪ್ರದರ್ಶನಗೊಂಡು ಎ ಪ್ರಮಾಣಪತ್ ಪಡೆದಿದೆ. ಚಿತ್ರದಲ್ಲಿ ಸಾಕಷ್ಟು ಶೃಂಗಾರ ರಸ ದೃಶ್ಯಗಳು ಹಾಗೂ ಕೊಲೆಯ ದೃಶ್ಯಗಳು ಇರುವುದರಿಂದ ವಯಸ್ಕರ ಚಿತ್ರ ಎಂದು ಸೆನ್ಸಾರ್ ಮಂಡಳಿ ಪ್ರಮಾಣೀಕರಿಸಿದ್ದು ಇದೇ ತಿಂಗಳ ಅಂತ್ಯದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಸಿದ್ದೇವೆ ಎಂದು ಚಿತ್ರದ ನಿರ್ದೇಶಕರಾದ ರಾಜೇಶ್ ಮೂರ್ತಿರವರು ತಿಳಿಸಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ರಾಜೇಶ್ ಮೂರ್ತಿರವರು ಸಂಕಲನ ಹಾಗೂ ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತಿದ್ದಾರೆ.  ಈ ಚಿತ್ರದಲ್ಲಿ ಒಟ್ಟು ೫ ಹಾಡುಗಳಿದ್ದು ನಾಗೇಶ್ ಸಾಹಿತ್ಯ ರಚಿಸಿದ್ದಾರೆ.  ಅಲ್ಲವೆ ಕಾರ್ತಿಕ್ ಚಿತ್ರದ ಸಂಭಾಷಣೆಗಳನ್ನು ಬರೆದಿದ್ದು ಅಂಜನಾ ಛಾಯಾಗ್ರಹಣ ಮಾಡಿದ್ದಾರೆ.  ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯ ರಾಜ್ ಆರ್ಯನ್, ಕಾಮಿನಿ, ರಾಹುಲ್ ಸೋಮಣ್ಣ ಎಂ.ಜೆ.ಪೃಥ್ವಿ ಹಾಗೂ ಪಂಚಮಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed